ವಿಷಯಕ್ಕೆ ಹೋಗಿ

ಕೊನೆ

ನಿನ್ನ ನೆನಪು ಎದೆಯಿಂದ ಪುಟಿದು ಕಣ್ ಅಂಚ ಬಳಿ ಸೇರಿದೆ... 
ನಿನ್ನ ಕನಸು ಕಣ್ ಅಂಚ ಹೊಡೆದು ಕಣ್ಣೆರು ಭುವಿ ಸೇರಿದೆ.. 
ಮನಸ ಮುರಿದೆ.. ಹೃದಯ ಹರಿದೆ.. 
ಇದು ನಿಜವೋ ಸುಳ್ಳೋ.. ಬರಿ ಬ್ರಮೆಯೂ ಅರಿವೋ.. 
ಇದು ನನ್ನ ಕೊನೆಯ ಕವನ..!

ಆ ಮೂಡ ಮಳೆಗರೆದು ತಂಪಾದ.. 
ಆ ಸೂರ್ಯ ಮುಳುಗೆದ್ದು ಬಿಸಿಲಾಗಿದೆ.. 
ಮೊಗ್ಗು ಒಂದು ಹೂವಾಗಲು ಕ್ಷಣ ಕಾದಿದೆ.. 
ಜೇನ ಹೀರಲು ದುಂಬಿ ಹಾತೊರೆದಿದೆ.. 
ಹೂವ ಕುಯ್ಯಲು ಕೈ ಕಾಯುತ್ತಿದೆ.. 
ನಾನು ಮದುವೆಗೂ.. ಇಲ್ಲ ಮಸಣ್ಣಕೊ.. 
ಇದು ನನ್ನ ಕೊನೆಯ ನಮನ..!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸ್ನೇಹಿತ

ಸ್ನೇಹಿತನೆ ಸ್ನೇಹಿತನೆ ಹೃದಯದ ಸ್ನೇಹಿತನೆ...  ನನ್ನ ಚಿಕ್ಕ ಕೋರಿಕೆಯ ಆಲಿಸು ಸ್ನೇಹಿತನೆ...  ನೀನೇ ಉಸಿರು ಉಸಿರು ನನ್ನ ಕನಸು ಕನಸು...  ನಾಳಿನ ಬದುಕಿನಲ್ಲಿ ನೀನೇ ನನ್ನ ಅಳಿವು ಉಳಿವಿಗೆ ಕಾರಣನು.. ಸಣ್ಣ ಪುಟ್ಟ ನೆವಗಳ ಹೇಳುತ್ತಾ ನನ್ನ ಸೀರೆ ಸೆರಗಲ್ಲಿ ಆಡುತ ಹಾಗೆಯೇ ಮಲಗಿಸು...  ನನ್ನ ಕಣ್ಣ ಅಂಚಿನಲ್ಲಿ ನಗಿಸುತ  ಕೈಯ ಹಿಡಿದು ಹಾಗೆ ಸ್ವಲ್ಪ ಗಿಲ್ಲೂತ  ಮುತ್ತನು ಉಣಿಸು...  ನಿನ್ನ ಎದೆಗೆ ಒರಗಿ ಹಾಗೆ ಅಳುವುದ ನಾ ಬಯಸುವೆ...  ಅಳುತ್ತಾ ಇರಲು ನೀನು ನಗಿಸಿ ಬದುಕನು ಕರುಣಿಸಿಹೆ...

ನಿನ್ನ ನೆನೆಪು

ಇನ್ನು ಹಗಲು ಇರುಳು ನಿನ್ನ ನೆನಪೇ ಕಾಡಿದೆ ಹೃದಯದ ಈ ಭಾಷೆ ಅರಿಯದೆ ಹೋಗಿದೆ  ನಿನ್ನ ನೆನೆಪುಗಳನ್ನೇ ನೆನೆದು ದಿನ ತಳ್ಳಿದೆ ಹೃದಯ ಈ ಕರೆಗೆ ಪ್ರತಿಧ್ವನಿಸಿರುವೆ  ಈ ಕಣ್ಣ ಸಂದೇಶವ ಸಂದೇಶಿಸಿರುವೆ  ನಿನಗ್ಯಾವ ಸಂದೇಹ ಈ ಸಂಭಂದದಲ್ಲಿ  ನಿನ್ನ ಕರೆಗಾಗಿಯೇ ಕಾದಿರುವೆ ಇಲ್ಲಿ ನಿನ್ನಲ್ಲಿ ಕಂಡಿಹೆನು ನಾನು ನನ್ನನು  ನನ್ನಲಿ ನೀ ನಿನ್ನನು ಕಾಣಲಿಲ್ಲವೇನು  ಈ ಭಾವಕ್ಕೆ ಬೇರೆ ಬಹುಮಾನ ಬೇಕೇ  ಈ ಹೃದಯದ ಹಾಡಿಗೆ ಮೌನರಾಗ ಸಾಕೆ

ಕೃಪೆ

ತಿರುವಿನಾ ತಿರುವಲ್ಲಿ ತಿರುಗುವ ತನುವನ್ನು ತನ್ನತ್ತ ಸೆಳೆದೀತೇ ಮನವು... ತಲ್ಲಣಿಸುವ ಅವಧಿಯಲ್ಲಿ ತನ್ಮಯತೆ ತೊರೆದಾಗ ತನ್ನತ್ತ ಒಲಿದೀತೆ ಒಲವು... ಮನಸ್ಸು ಮಲಗಿರಲು, ಒಡಲಲ್ಲಿ ಕನಸೊಂದು ಲಾಲಿಯ ಹಾಡುತಿದೆ ರಾಗದಲ್ಲಿ ಎಚ್ಚರಿಕೆಯು ಮನಮುಟ್ಟಿ ಎಚ್ಚರಿಸಿದ ಕ್ಷಣದಲ್ಲಿ ರಾಗವಾ ಮರೆತಾಯಿತು ಮೌನದಲ್ಲಿ. ತೋರದಾಯಿತು ಕನಸ್ಸಿಂದು, ಮನಸ್ಸಿಂದ ಮುಗುಳ್ನಗುತ ಹೋಗುವೆ ನಾನಿಂದು - ಬಾರೆನೆಂದು. ತನುವೆಂದು ಮನಮಾಡಿ ಒಲವಿಂದ ಕರೆಯುವುದೋ ಬರುವೆನು ನಾನಾಗ - ಕೃಪೆಯಮಾಡಿ