ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿನ್ನ ನೆನೆಪು

ಇನ್ನು ಹಗಲು ಇರುಳು ನಿನ್ನ ನೆನಪೇ ಕಾಡಿದೆ ಹೃದಯದ ಈ ಭಾಷೆ ಅರಿಯದೆ ಹೋಗಿದೆ  ನಿನ್ನ ನೆನೆಪುಗಳನ್ನೇ ನೆನೆದು ದಿನ ತಳ್ಳಿದೆ ಹೃದಯ ಈ ಕರೆಗೆ ಪ್ರತಿಧ್ವನಿಸಿರುವೆ  ಈ ಕಣ್ಣ ಸಂದೇಶವ ಸಂದೇಶಿಸಿರುವೆ  ನಿನಗ್ಯಾವ ಸಂದೇಹ ಈ ಸಂಭಂದದಲ್ಲಿ  ನಿನ್ನ ಕರೆಗಾಗಿಯೇ ಕಾದಿರುವೆ ಇಲ್ಲಿ ನಿನ್ನಲ್ಲಿ ಕಂಡಿಹೆನು ನಾನು ನನ್ನನು  ನನ್ನಲಿ ನೀ ನಿನ್ನನು ಕಾಣಲಿಲ್ಲವೇನು  ಈ ಭಾವಕ್ಕೆ ಬೇರೆ ಬಹುಮಾನ ಬೇಕೇ  ಈ ಹೃದಯದ ಹಾಡಿಗೆ ಮೌನರಾಗ ಸಾಕೆ

ನಿನ್ನ ಪ್ರೀತಿಯ ಕಂಡು

ಎಂದೋ ಕಂಡ ಕನಸು  ನನಸಾಗಿದೆ ಇಂದು  ನಿನ್ನ ಪ್ರೀತಿಯ ಕಂಡು  ಸೋತೆನು ನಾನು ಇಂದು ಪ್ರೀತಿಯ ಭಾಷೆಯ ಪದ ಪದ ಪದಕ್ಕೆ  ಪದ ಪದವಾಗಿ ನಾ ಬೆರೆತೆ  ನಿನ್ನ ಕಣ್ಣ ಭಾಷೆಯ ಕಲೆತು  ಮಾತನೆ ನಾನು ಮರೆತೋದೇ  ನಿನ್ನ ಪ್ರೀತಿಯ ಪಡೆದು  ಧನ್ಯನಾದೆ ಇಂದು  ನಿನ್ನ ಪ್ರೀತಿಯ ಕಂಡು  ಸೋತೆನು ನಾನು ಇಂದು ಪ್ರೀತಿಯ ಪಯಣದಿ ಜೊತೆ ಜೊತೆಯಾಗಿ  ನಿನ್ನ ಜೊತೆಯಲ್ಲೇ ನಾ ಬರುವೆ ನಿನ್ನ ಜೀವದ ಭಾವದ ಜೊತೆಗೆ  ನನ್ನ ಉಸಿರನು ಬೆರೆಸಿರುವೆ  ಈ ಲೋಕವೇ ಉರುಳಿದರು  ನಿನ್ನ ಕೈಯ ಬೇಡನು  ನಿನ್ನ ಪ್ರೀತಿಯ ಕಂಡು  ಸೋತೆನು ನಾನು ಇಂದು