ಇನ್ನು ಹಗಲು ಇರುಳು ನಿನ್ನ ನೆನಪೇ ಕಾಡಿದೆ
ಹೃದಯದ ಈ ಭಾಷೆ ಅರಿಯದೆ ಹೋಗಿದೆ
ನಿನ್ನ ನೆನೆಪುಗಳನ್ನೇ ನೆನೆದು ದಿನ ತಳ್ಳಿದೆ
ಹೃದಯದ ಈ ಭಾಷೆ ಅರಿಯದೆ ಹೋಗಿದೆ
ನಿನ್ನ ನೆನೆಪುಗಳನ್ನೇ ನೆನೆದು ದಿನ ತಳ್ಳಿದೆ
ಹೃದಯ ಈ ಕರೆಗೆ ಪ್ರತಿಧ್ವನಿಸಿರುವೆ
ಈ ಕಣ್ಣ ಸಂದೇಶವ ಸಂದೇಶಿಸಿರುವೆ
ನಿನಗ್ಯಾವ ಸಂದೇಹ ಈ ಸಂಭಂದದಲ್ಲಿ
ನಿನ್ನ ಕರೆಗಾಗಿಯೇ ಕಾದಿರುವೆ ಇಲ್ಲಿ
ಈ ಕಣ್ಣ ಸಂದೇಶವ ಸಂದೇಶಿಸಿರುವೆ
ನಿನಗ್ಯಾವ ಸಂದೇಹ ಈ ಸಂಭಂದದಲ್ಲಿ
ನಿನ್ನ ಕರೆಗಾಗಿಯೇ ಕಾದಿರುವೆ ಇಲ್ಲಿ
ನಿನ್ನಲ್ಲಿ ಕಂಡಿಹೆನು ನಾನು ನನ್ನನು
ನನ್ನಲಿ ನೀ ನಿನ್ನನು ಕಾಣಲಿಲ್ಲವೇನು
ಈ ಭಾವಕ್ಕೆ ಬೇರೆ ಬಹುಮಾನ ಬೇಕೇ
ಈ ಹೃದಯದ ಹಾಡಿಗೆ ಮೌನರಾಗ ಸಾಕೆ
ನನ್ನಲಿ ನೀ ನಿನ್ನನು ಕಾಣಲಿಲ್ಲವೇನು
ಈ ಭಾವಕ್ಕೆ ಬೇರೆ ಬಹುಮಾನ ಬೇಕೇ
ಈ ಹೃದಯದ ಹಾಡಿಗೆ ಮೌನರಾಗ ಸಾಕೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ