ವಿಷಯಕ್ಕೆ ಹೋಗಿ

ಕೃಪೆ

ತಿರುವಿನಾ ತಿರುವಲ್ಲಿ ತಿರುಗುವ ತನುವನ್ನು
ತನ್ನತ್ತ ಸೆಳೆದೀತೇ ಮನವು...
ತಲ್ಲಣಿಸುವ ಅವಧಿಯಲ್ಲಿ ತನ್ಮಯತೆ ತೊರೆದಾಗ
ತನ್ನತ್ತ ಒಲಿದೀತೆ ಒಲವು...

ಮನಸ್ಸು ಮಲಗಿರಲು, ಒಡಲಲ್ಲಿ ಕನಸೊಂದು
ಲಾಲಿಯ ಹಾಡುತಿದೆ ರಾಗದಲ್ಲಿ
ಎಚ್ಚರಿಕೆಯು ಮನಮುಟ್ಟಿ ಎಚ್ಚರಿಸಿದ ಕ್ಷಣದಲ್ಲಿ
ರಾಗವಾ ಮರೆತಾಯಿತು ಮೌನದಲ್ಲಿ.

ತೋರದಾಯಿತು ಕನಸ್ಸಿಂದು, ಮನಸ್ಸಿಂದ ಮುಗುಳ್ನಗುತ
ಹೋಗುವೆ ನಾನಿಂದು - ಬಾರೆನೆಂದು.
ತನುವೆಂದು ಮನಮಾಡಿ ಒಲವಿಂದ ಕರೆಯುವುದೋ
ಬರುವೆನು ನಾನಾಗ - ಕೃಪೆಯಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸ್ನೇಹಿತ

ಸ್ನೇಹಿತನೆ ಸ್ನೇಹಿತನೆ ಹೃದಯದ ಸ್ನೇಹಿತನೆ...  ನನ್ನ ಚಿಕ್ಕ ಕೋರಿಕೆಯ ಆಲಿಸು ಸ್ನೇಹಿತನೆ...  ನೀನೇ ಉಸಿರು ಉಸಿರು ನನ್ನ ಕನಸು ಕನಸು...  ನಾಳಿನ ಬದುಕಿನಲ್ಲಿ ನೀನೇ ನನ್ನ ಅಳಿವು ಉಳಿವಿಗೆ ಕಾರಣನು.. ಸಣ್ಣ ಪುಟ್ಟ ನೆವಗಳ ಹೇಳುತ್ತಾ ನನ್ನ ಸೀರೆ ಸೆರಗಲ್ಲಿ ಆಡುತ ಹಾಗೆಯೇ ಮಲಗಿಸು...  ನನ್ನ ಕಣ್ಣ ಅಂಚಿನಲ್ಲಿ ನಗಿಸುತ  ಕೈಯ ಹಿಡಿದು ಹಾಗೆ ಸ್ವಲ್ಪ ಗಿಲ್ಲೂತ  ಮುತ್ತನು ಉಣಿಸು...  ನಿನ್ನ ಎದೆಗೆ ಒರಗಿ ಹಾಗೆ ಅಳುವುದ ನಾ ಬಯಸುವೆ...  ಅಳುತ್ತಾ ಇರಲು ನೀನು ನಗಿಸಿ ಬದುಕನು ಕರುಣಿಸಿಹೆ...

ನೆನಪಲ್ಲೇ

ನೀನೇಕೆ ಎದುರಾದೆ ಮನಸೋತೆ ನಾನೇಕೆ ಓ ಪ್ರೀತಿ... ಈ ರೀತಿ... ಏಕಾದೆ..? ನಿನ್ನ ನೆನಪಲ್ಲೇ ನಾ ಉಳಿವೆ ನಿನ್ನ ನೆನಪಲ್ಲೇ ನಾ ಅಳಿವೆ ಈ ಹೃದಯದಿ ನಿನ್ನ ಹೆಸರ ನಾ ಬರೆದೆ ಮನದಲ್ಲಿ ನೀನಾಗ ಬಂದು ಕುಂತಿದ್ದೆ ಕೈಹಿಡಿದು ಜೊತೆಯಾಗೇ ನೀಬರುವೆ ಎಂದು ನೀನನಗೆ ಮಾತು ಕೊಟ್ಟಿದೆ ಈಗ ಮಾತೇ ಮರೆತೋಯಿತ... ಹೆಸರೇ ಅಳಿಸಿಹೋಯಿತಾ... ಇಲ್ಲ ನಿನ್ನ ಮನದಲ್ಲಿ ಬೇರೆ ಹೆಸರಿತ್ತಾ..? ಕನಸನ್ನೇ ಕಾಣದ ಮನದಲ್ಲಿ ಕನಸಾಗಿ ನಿನ್ನ ನೆನಪು ಧಾಳಿ ಮಾಡಾಯಿತು ಮನದಲ್ಲಿ ಈ ಪ್ರೀತಿ ಚಿಗುರಿಸಿ ಹೂವಾಗೋದ್ರೊಳಗೆ ಮೊಗ್ಗು ಬಾಡಿಹೋಯಿತು ಈಗ ಮನಸೇ ಮರೆತೋಯಿತ... ಕನಸೇ ಕಳೆದೋಯಿತಾ ಇಲ್ಲ ನಿನ್ನ ಕನಸಲ್ಲಿ ಬೇರೆ ಮಾನಸಿತ್ತಾ...?