ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕೊನೆ

ನಿನ್ನ ನೆನಪು ಎದೆಯಿಂದ ಪುಟಿದು ಕಣ್ ಅಂಚ ಬಳಿ ಸೇರಿದೆ...  ನಿನ್ನ ಕನಸು ಕಣ್ ಅಂಚ ಹೊಡೆದು ಕಣ್ಣೆರು ಭುವಿ ಸೇರಿದೆ..  ಮನಸ ಮುರಿದೆ.. ಹೃದಯ ಹರಿದೆ..  ಇದು ನಿಜವೋ ಸುಳ್ಳೋ.. ಬರಿ ಬ್ರಮೆಯೂ ಅರಿವೋ..  ಇದು ನನ್ನ ಕೊನೆಯ ಕವನ..! ಆ ಮೂಡ ಮಳೆಗರೆದು ತಂಪಾದ..  ಆ ಸೂರ್ಯ ಮುಳುಗೆದ್ದು ಬಿಸಿಲಾಗಿದೆ..  ಮೊಗ್ಗು ಒಂದು ಹೂವಾಗಲು ಕ್ಷಣ ಕಾದಿದೆ..  ಜೇನ ಹೀರಲು ದುಂಬಿ ಹಾತೊರೆದಿದೆ..  ಹೂವ ಕುಯ್ಯಲು ಕೈ ಕಾಯುತ್ತಿದೆ..  ನಾನು ಮದುವೆಗೂ.. ಇಲ್ಲ ಮಸಣ್ಣಕೊ..  ಇದು ನನ್ನ ಕೊನೆಯ ನಮನ..!

Someಬಂಧ

ಯಾವ ವೀಣೆಯ ತಂತಿ ಮೀಟಿದೇ ನಿನ್ನ ಹೃದಯದ ತಾಳಕೆ.. ಯಾವ ಹೃದಯ ಹಾರಿ ಬಂದಿದೆ ನಿನ್ನ ಹಾಡಿನ ರಾಗಕೆ.. ನಿನ್ನ ಕಾಲಿನ ಘಲ್ಲು ಘಲ್ಲಿನ ಗೆಜ್ಜೆ ನರ್ತನ ನಾದಕೆ.. ಇಲ್ಲೇ ಇದ್ದ ಪ್ರೀತಿ ಹಕ್ಕಿಯು ಎಲ್ಲಿ ಹಾರಿ ಹೋಗಿದ...

ಕನಸು

ಕಲ್ಪನೆಯ ಕನಸು ಇದು.. ಕಣ್ಒಂದೇ ಕಾಣುವುದು..  ಹಿಂತಿರುಗಿ ನೋಡಿದರೆ ಕೊಳೆತೆವೆಸ್ಟೋ ಅಲ್ಲಿ..  ಮುಂತಿರುಗಿ ನೋಡಿರೆ ಉಳಿದವೆಸ್ಟೋ ಇಲ್ಲಿ..  ನಮ್ಮ ನೋಟಕ್ಕೆ ಪರದೆ ಎಳೆದ ನಾವು..  ದೃಷ್ಟಿ ಇದ್ದರೆನು.. ಇಲ್ಲದಿದ್ದರೆನು.. ಕತ್ತಲೆಂದರೆನು.. ಬೆಳಕುಯೆಂದರೆನು.. ಮನಸ ಮನಸ ಮದ್ಯೆ ಕನಸು ತಂದವರಾರು..  ಕನಸು ನನಸಾಗಿಸಿ ಮನಸು ಗೆದ್ದವರಾರು..  ಯಾರದೋ ಕನಸನ್ನು ನಮ್ಮದೆನ್ನಿಸಿ... ಆ ಕನಸ ನನಸಾಗಲು ಕಾರ್ಯ ಓಪ್ಪಿಸಿ...  ಕಾಯಕವೇ ದೇವರೆಂದು ನಂಬಿಸುವ ಇವರು..  ಆಸ್ತಿಕರೂ ಇವರು.. ನಾಸ್ತಿಕರೂ ಇವರು.. ಕರ್ತೃಗಳೂ ಇವರು.. ಕ್ರೂರಿಗಳೂ ಇವರು… ವಿದ್ಯೆ ಬುದ್ದಿಯ ಮದ್ಯ ದುಡ್ಡು ತಂದವರಾರು..  ಕಲೆಗೆ ಬೆಲೆ ಕಟ್ಟಲು ತಲೆಯ ಹಿಡಿದವರರು..  ಯಾರದೋ ಅಸ್ತಿಯ ಮೇಲೆ ಹುಟ್ಟಿ ಬಂದೆವು..  ಅವರ ಕನಸನ್ನೆ ಮತ್ತೆ ಹೊತ್ತು ತಂದೆವು..  ಎಲ್ಲಾ ಕನಸಿನ ಮೂಲ ಅಹಮ್ ಎಂದಮೇಲೆ..  ಹಾವು ಇಲ್ಲಿ ಯಾರು.. ಇಲಿ ಇಲ್ಲಿ ಯಾರು.. ಹುಲಿ ಇಲ್ಲಿ ಯಾರು.. ಹಸು ಇಲ್ಲಿ ಯಾರು..