ವಿಷಯಕ್ಕೆ ಹೋಗಿ

Someಬಂಧ

ಯಾವ ವೀಣೆಯ ತಂತಿ ಮೀಟಿದೇ ನಿನ್ನ ಹೃದಯದ ತಾಳಕೆ.. ಯಾವ ಹೃದಯ ಹಾರಿ ಬಂದಿದೆ ನಿನ್ನ ಹಾಡಿನ ರಾಗಕೆ..

ನಿನ್ನ ಕಾಲಿನ ಘಲ್ಲು ಘಲ್ಲಿನ ಗೆಜ್ಜೆ ನರ್ತನ ನಾದಕೆ.. ಇಲ್ಲೇ ಇದ್ದ ಪ್ರೀತಿ ಹಕ್ಕಿಯು ಎಲ್ಲಿ ಹಾರಿ ಹೋಗಿದೆ..

ಕೈಯ ಹಿಡಿದೇ ಹೆಜ್ಜೆ ಬೆಸೆದೆ ನಡಿಗೆ ಮುಂದೆ ನಡೆಸಿದೆ.. ನೀನು ತೊರೆದು ಹೋದ ಗಳಿಗೆ ಬದುಕೇ ಆರಿ ಹೋಗಿದೆ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನಸು

ಕಲ್ಪನೆಯ ಕನಸು ಇದು.. ಕಣ್ಒಂದೇ ಕಾಣುವುದು..  ಹಿಂತಿರುಗಿ ನೋಡಿದರೆ ಕೊಳೆತೆವೆಸ್ಟೋ ಅಲ್ಲಿ..  ಮುಂತಿರುಗಿ ನೋಡಿರೆ ಉಳಿದವೆಸ್ಟೋ ಇಲ್ಲಿ..  ನಮ್ಮ ನೋಟಕ್ಕೆ ಪರದೆ ಎಳೆದ ನಾವು..  ದೃಷ್ಟಿ ಇದ್ದರೆನು.. ಇಲ್ಲದಿದ್ದರೆನು.. ಕತ್ತಲೆಂದರೆನು.. ಬೆಳಕುಯೆಂದರೆನು.. ಮನಸ ಮನಸ ಮದ್ಯೆ ಕನಸು ತಂದವರಾರು..  ಕನಸು ನನಸಾಗಿಸಿ ಮನಸು ಗೆದ್ದವರಾರು..  ಯಾರದೋ ಕನಸನ್ನು ನಮ್ಮದೆನ್ನಿಸಿ... ಆ ಕನಸ ನನಸಾಗಲು ಕಾರ್ಯ ಓಪ್ಪಿಸಿ...  ಕಾಯಕವೇ ದೇವರೆಂದು ನಂಬಿಸುವ ಇವರು..  ಆಸ್ತಿಕರೂ ಇವರು.. ನಾಸ್ತಿಕರೂ ಇವರು.. ಕರ್ತೃಗಳೂ ಇವರು.. ಕ್ರೂರಿಗಳೂ ಇವರು… ವಿದ್ಯೆ ಬುದ್ದಿಯ ಮದ್ಯ ದುಡ್ಡು ತಂದವರಾರು..  ಕಲೆಗೆ ಬೆಲೆ ಕಟ್ಟಲು ತಲೆಯ ಹಿಡಿದವರರು..  ಯಾರದೋ ಅಸ್ತಿಯ ಮೇಲೆ ಹುಟ್ಟಿ ಬಂದೆವು..  ಅವರ ಕನಸನ್ನೆ ಮತ್ತೆ ಹೊತ್ತು ತಂದೆವು..  ಎಲ್ಲಾ ಕನಸಿನ ಮೂಲ ಅಹಮ್ ಎಂದಮೇಲೆ..  ಹಾವು ಇಲ್ಲಿ ಯಾರು.. ಇಲಿ ಇಲ್ಲಿ ಯಾರು.. ಹುಲಿ ಇಲ್ಲಿ ಯಾರು.. ಹಸು ಇಲ್ಲಿ ಯಾರು..

ಸ್ನೇಹಿತ

ಸ್ನೇಹಿತನೆ ಸ್ನೇಹಿತನೆ ಹೃದಯದ ಸ್ನೇಹಿತನೆ...  ನನ್ನ ಚಿಕ್ಕ ಕೋರಿಕೆಯ ಆಲಿಸು ಸ್ನೇಹಿತನೆ...  ನೀನೇ ಉಸಿರು ಉಸಿರು ನನ್ನ ಕನಸು ಕನಸು...  ನಾಳಿನ ಬದುಕಿನಲ್ಲಿ ನೀನೇ ನನ್ನ ಅಳಿವು ಉಳಿವಿಗೆ ಕಾರಣನು.. ಸಣ್ಣ ಪುಟ್ಟ ನೆವಗಳ ಹೇಳುತ್ತಾ ನನ್ನ ಸೀರೆ ಸೆರಗಲ್ಲಿ ಆಡುತ ಹಾಗೆಯೇ ಮಲಗಿಸು...  ನನ್ನ ಕಣ್ಣ ಅಂಚಿನಲ್ಲಿ ನಗಿಸುತ  ಕೈಯ ಹಿಡಿದು ಹಾಗೆ ಸ್ವಲ್ಪ ಗಿಲ್ಲೂತ  ಮುತ್ತನು ಉಣಿಸು...  ನಿನ್ನ ಎದೆಗೆ ಒರಗಿ ಹಾಗೆ ಅಳುವುದ ನಾ ಬಯಸುವೆ...  ಅಳುತ್ತಾ ಇರಲು ನೀನು ನಗಿಸಿ ಬದುಕನು ಕರುಣಿಸಿಹೆ...

ನಿನ್ನ ನೆನೆಪು

ಇನ್ನು ಹಗಲು ಇರುಳು ನಿನ್ನ ನೆನಪೇ ಕಾಡಿದೆ ಹೃದಯದ ಈ ಭಾಷೆ ಅರಿಯದೆ ಹೋಗಿದೆ  ನಿನ್ನ ನೆನೆಪುಗಳನ್ನೇ ನೆನೆದು ದಿನ ತಳ್ಳಿದೆ ಹೃದಯ ಈ ಕರೆಗೆ ಪ್ರತಿಧ್ವನಿಸಿರುವೆ  ಈ ಕಣ್ಣ ಸಂದೇಶವ ಸಂದೇಶಿಸಿರುವೆ  ನಿನಗ್ಯಾವ ಸಂದೇಹ ಈ ಸಂಭಂದದಲ್ಲಿ  ನಿನ್ನ ಕರೆಗಾಗಿಯೇ ಕಾದಿರುವೆ ಇಲ್ಲಿ ನಿನ್ನಲ್ಲಿ ಕಂಡಿಹೆನು ನಾನು ನನ್ನನು  ನನ್ನಲಿ ನೀ ನಿನ್ನನು ಕಾಣಲಿಲ್ಲವೇನು  ಈ ಭಾವಕ್ಕೆ ಬೇರೆ ಬಹುಮಾನ ಬೇಕೇ  ಈ ಹೃದಯದ ಹಾಡಿಗೆ ಮೌನರಾಗ ಸಾಕೆ