ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಹೀಗೆಲ್ಲ

ನಾನು ನಾನಾಗಿಯೇ ಉಳಿದಿಲ್ಲ ನಾನು ನೀನಾಗಿಯೇ ಹೋದೆನಲ್ಲ ಬೇಡ ಬೇಡ ಹೇಗೆ ಕಾಡಬೇಡ ಓ ಪ್ರಿಯೆ ಓ ಪ್ರಿಯೆ...ನನ್ನ ಹೀಗೆಲ್ಲ ಕದ್ದು ಕದ್ದು ನೀನು ಹೀಗೆ... ನನ್ನ ನೋಡೋಗಳಿಗೆಗೆ... ಮರುಜನ್ಮ ನಾ ಪಡೆದೆ ನನ್ನ ಮನದಲ್ಲೇ . ಮುದ್ದು ಮುದ್ದಾದ ನಿನ್ನ... ಆ ಸವಿಯ ನಗೆಗೆ... ಮನಸೋತು ನಾನೀಗ ಮರುಳನಾದೆ. ನನ್ನಯ ಈ ಜೀವಕೆ ಭಾವಕೆ ಒಡತಿಯೇ... ಪ್ರೀತಿಯ ಈ ಹೃದಯಕೆ ಪನ್ನೇರ್ರೆರಚಿದೆ.

ಕೃಪೆ

ತಿರುವಿನಾ ತಿರುವಲ್ಲಿ ತಿರುಗುವ ತನುವನ್ನು ತನ್ನತ್ತ ಸೆಳೆದೀತೇ ಮನವು... ತಲ್ಲಣಿಸುವ ಅವಧಿಯಲ್ಲಿ ತನ್ಮಯತೆ ತೊರೆದಾಗ ತನ್ನತ್ತ ಒಲಿದೀತೆ ಒಲವು... ಮನಸ್ಸು ಮಲಗಿರಲು, ಒಡಲಲ್ಲಿ ಕನಸೊಂದು ಲಾಲಿಯ ಹಾಡುತಿದೆ ರಾಗದಲ್ಲಿ ಎಚ್ಚರಿಕೆಯು ಮನಮುಟ್ಟಿ ಎಚ್ಚರಿಸಿದ ಕ್ಷಣದಲ್ಲಿ ರಾಗವಾ ಮರೆತಾಯಿತು ಮೌನದಲ್ಲಿ. ತೋರದಾಯಿತು ಕನಸ್ಸಿಂದು, ಮನಸ್ಸಿಂದ ಮುಗುಳ್ನಗುತ ಹೋಗುವೆ ನಾನಿಂದು - ಬಾರೆನೆಂದು. ತನುವೆಂದು ಮನಮಾಡಿ ಒಲವಿಂದ ಕರೆಯುವುದೋ ಬರುವೆನು ನಾನಾಗ - ಕೃಪೆಯಮಾಡಿ