ನೀನೇಕೆ ಎದುರಾದೆ ಮನಸೋತೆ ನಾನೇಕೆ ಓ ಪ್ರೀತಿ... ಈ ರೀತಿ... ಏಕಾದೆ..? ನಿನ್ನ ನೆನಪಲ್ಲೇ ನಾ ಉಳಿವೆ ನಿನ್ನ ನೆನಪಲ್ಲೇ ನಾ ಅಳಿವೆ ಈ ಹೃದಯದಿ ನಿನ್ನ ಹೆಸರ ನಾ ಬರೆದೆ ಮನದಲ್ಲಿ ನೀನಾಗ ಬಂದು ಕುಂತಿದ್ದೆ ಕೈಹಿಡಿದು ಜೊತೆಯಾಗೇ ನೀಬರುವೆ ಎಂದು ನೀನನಗೆ ಮಾತು ಕೊಟ್ಟಿದೆ ಈಗ ಮಾತೇ ಮರೆತೋಯಿತ... ಹೆಸರೇ ಅಳಿಸಿಹೋಯಿತಾ... ಇಲ್ಲ ನಿನ್ನ ಮನದಲ್ಲಿ ಬೇರೆ ಹೆಸರಿತ್ತಾ..? ಕನಸನ್ನೇ ಕಾಣದ ಮನದಲ್ಲಿ ಕನಸಾಗಿ ನಿನ್ನ ನೆನಪು ಧಾಳಿ ಮಾಡಾಯಿತು ಮನದಲ್ಲಿ ಈ ಪ್ರೀತಿ ಚಿಗುರಿಸಿ ಹೂವಾಗೋದ್ರೊಳಗೆ ಮೊಗ್ಗು ಬಾಡಿಹೋಯಿತು ಈಗ ಮನಸೇ ಮರೆತೋಯಿತ... ಕನಸೇ ಕಳೆದೋಯಿತಾ ಇಲ್ಲ ನಿನ್ನ ಕನಸಲ್ಲಿ ಬೇರೆ ಮಾನಸಿತ್ತಾ...?
ಇನ್ನು ಹಗಲು ಇರುಳು ನಿನ್ನ ನೆನಪೇ ಕಾಡಿದೆ ಹೃದಯದ ಈ ಭಾಷೆ ಅರಿಯದೆ ಹೋಗಿದೆ ನಿನ್ನ ನೆನೆಪುಗಳನ್ನೇ ನೆನೆದು ದಿನ ತಳ್ಳಿದೆ ಹೃದಯ ಈ ಕರೆಗೆ ಪ್ರತಿಧ್ವನಿಸಿರುವೆ ಈ ಕಣ್ಣ ಸಂದೇಶವ ಸಂದೇಶಿಸಿರುವೆ ನಿನಗ್ಯಾವ ಸಂದೇಹ ಈ ಸಂಭಂದದಲ್ಲಿ ನಿನ್ನ ಕರೆಗಾಗಿಯೇ ಕಾದಿರುವೆ ಇಲ್ಲಿ ನಿನ್ನಲ್ಲಿ ಕಂಡಿಹೆನು ನಾನು ನನ್ನನು ನನ್ನಲಿ ನೀ ನಿನ್ನನು ಕಾಣಲಿಲ್ಲವೇನು ಈ ಭಾವಕ್ಕೆ ಬೇರೆ ಬಹುಮಾನ ಬೇಕೇ ಈ ಹೃದಯದ ಹಾಡಿಗೆ ಮೌನರಾಗ ಸಾಕೆ