ಮಲಗಲೀ ಕನಸು ಮೂಡಲೀ
ಎಚ್ಚರದ ಈ ಬದುಕಲ್ಲಿ
ಒಮ್ಮೊಮೆ ಹಾಗೆ ಈ ಮನವು (ಮಲಗಲೀ)
ನೆರಳಿನ ಹಿಂದೆ ಓಡುತಲಿಹುದು
ನಮ್ಮೆಲ್ಲರ ತನುವು
ಶಶಿಯನು ಕೈಯಲ್ಲಿ ಹಿಡಿಯುವ ಯತ್ನ
ನಡೆದಿದೆ ಪ್ರತಿ ದಿನವೂ
ಹಸಿದಿರುವ ಹಕ್ಕಿಗೆ ಎಲ್ಲಾದರು
ಕೂಳು ಸಿಗುವವರೆಗೂ(ಮಲಗಲೀ)
ಎಷ್ಟೋ ಮುಖಗಳು ಸುತ್ತಲೂ ಇಹುದು
ಏಕಾಂಗಿ ಎಲ್ಲರೂ
ನಿನ್ನ ಕೆಲಸ ಸುಮ್ಮನೆ ನಡೆವುದು
ಎಲ್ಲಾ ತಿಳಿದಿದ್ದರೂ
ಮುಖವಾಡದ ಈ ಮುಖಗಳಲ್ಲಿ
ನನ್ನವರು ಯಾರೋ ಸಿಗುವವರೆಗೂ(ಮಲಗಲೀ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ