ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನಿನಗಾಗಿ

ನಿನಗಾಗಿಯೇ ಈ ಜೀವವು ಇನ್ನು ಉಳಿದಿದೆ... ನಿನಗಾಗಿಯೇ ಈ ಹೃದಯವು ಇನ್ನು ಮಿಡಿದಿದೆ... ಮನದಲಿ ಬೆಳಗಿದ ಪ್ರೀತಿಯ ಜ್ಯೋತಿಯು ಬೆಳಗಿದೆ ನಿನಗಾಗಿ... ನೆನಪು ಹೊತ್ತು ತಂದಿದೆ ಖುಷಿಯ ದಿನಗಳಾ... ಅದರಲಿ ತುಂಬಿದೆ ಕಳೆದಾ ಕ್ಷಣಗಳಾ... ಹೃದಯದಿ ಬೆರೆತೆವು ಬದುಕಲಿ ಸೇರದೆ... ಬಯಸಿದ್ದು ಪಡೆದದ್ದು ಬೇರೆನೆಯಿದೆ... ಮನದಲಿ ಬೆಳಗಿದ ಪ್ರೀತಿಯ ಜ್ಯೋತಿಯು ಬೆಳಗಿದೆ ನಿನಗಾಗಿ... ಶಾಪವು ನಾ ಬದುಕಲು ನೀನಿರದಾ ಬಾಳಲಿ... ಹನಿಯೊಂದು ಉಳಿದಿದೆ  ಕಣ್ಣ ಅಂಚಲಿ... ಒಡೆದಿರೋ ಕನಸನ್ನು ಹೆಣೆವ ಬರದಲಿ... ನೋವೆಂದು ಬಣ್ಣವನು ಹರಿಸುವುದು ಬಾಳಲಿ... ಮನದಲಿ ಬೆಳಗಿದ ಪ್ರೀತಿಯ ಜ್ಯೋತಿಯು ಬೆಳಗಿದೆ ನಿನಗಾಗಿ...

ನನ್ನ ಹೀಗೆಲ್ಲ

ನಾನು ನಾನಾಗಿಯೇ ಉಳಿದಿಲ್ಲ ನಾನು ನೀನಾಗಿಯೇ ಹೋದೆನಲ್ಲ ಬೇಡ ಬೇಡ ಹೇಗೆ ಕಾಡಬೇಡ ಓ ಪ್ರಿಯೆ ಓ ಪ್ರಿಯೆ...ನನ್ನ ಹೀಗೆಲ್ಲ ಕದ್ದು ಕದ್ದು ನೀನು ಹೀಗೆ... ನನ್ನ ನೋಡೋಗಳಿಗೆಗೆ... ಮರುಜನ್ಮ ನಾ ಪಡೆದೆ ನನ್ನ ಮನದಲ್ಲೇ . ಮುದ್ದು ಮುದ್ದಾದ ನಿನ್ನ... ಆ ಸವಿಯ ನಗೆಗೆ... ಮನಸೋತು ನಾನೀಗ ಮರುಳನಾದೆ. ನನ್ನಯ ಈ ಜೀವಕೆ ಭಾವಕೆ ಒಡತಿಯೇ... ಪ್ರೀತಿಯ ಈ ಹೃದಯಕೆ ಪನ್ನೇರ್ರೆರಚಿದೆ.

ಕೃಪೆ

ತಿರುವಿನಾ ತಿರುವಲ್ಲಿ ತಿರುಗುವ ತನುವನ್ನು ತನ್ನತ್ತ ಸೆಳೆದೀತೇ ಮನವು... ತಲ್ಲಣಿಸುವ ಅವಧಿಯಲ್ಲಿ ತನ್ಮಯತೆ ತೊರೆದಾಗ ತನ್ನತ್ತ ಒಲಿದೀತೆ ಒಲವು... ಮನಸ್ಸು ಮಲಗಿರಲು, ಒಡಲಲ್ಲಿ ಕನಸೊಂದು ಲಾಲಿಯ ಹಾಡುತಿದೆ ರಾಗದಲ್ಲಿ ಎಚ್ಚರಿಕೆಯು ಮನಮುಟ್ಟಿ ಎಚ್ಚರಿಸಿದ ಕ್ಷಣದಲ್ಲಿ ರಾಗವಾ ಮರೆತಾಯಿತು ಮೌನದಲ್ಲಿ. ತೋರದಾಯಿತು ಕನಸ್ಸಿಂದು, ಮನಸ್ಸಿಂದ ಮುಗುಳ್ನಗುತ ಹೋಗುವೆ ನಾನಿಂದು - ಬಾರೆನೆಂದು. ತನುವೆಂದು ಮನಮಾಡಿ ಒಲವಿಂದ ಕರೆಯುವುದೋ ಬರುವೆನು ನಾನಾಗ - ಕೃಪೆಯಮಾಡಿ

ಸ್ನೇಹಿತ

ಸ್ನೇಹಿತನೆ ಸ್ನೇಹಿತನೆ ಹೃದಯದ ಸ್ನೇಹಿತನೆ...  ನನ್ನ ಚಿಕ್ಕ ಕೋರಿಕೆಯ ಆಲಿಸು ಸ್ನೇಹಿತನೆ...  ನೀನೇ ಉಸಿರು ಉಸಿರು ನನ್ನ ಕನಸು ಕನಸು...  ನಾಳಿನ ಬದುಕಿನಲ್ಲಿ ನೀನೇ ನನ್ನ ಅಳಿವು ಉಳಿವಿಗೆ ಕಾರಣನು.. ಸಣ್ಣ ಪುಟ್ಟ ನೆವಗಳ ಹೇಳುತ್ತಾ ನನ್ನ ಸೀರೆ ಸೆರಗಲ್ಲಿ ಆಡುತ ಹಾಗೆಯೇ ಮಲಗಿಸು...  ನನ್ನ ಕಣ್ಣ ಅಂಚಿನಲ್ಲಿ ನಗಿಸುತ  ಕೈಯ ಹಿಡಿದು ಹಾಗೆ ಸ್ವಲ್ಪ ಗಿಲ್ಲೂತ  ಮುತ್ತನು ಉಣಿಸು...  ನಿನ್ನ ಎದೆಗೆ ಒರಗಿ ಹಾಗೆ ಅಳುವುದ ನಾ ಬಯಸುವೆ...  ಅಳುತ್ತಾ ಇರಲು ನೀನು ನಗಿಸಿ ಬದುಕನು ಕರುಣಿಸಿಹೆ...

ಯತ್ನ

ಮಲಗಲೀ ಕನಸು ಮೂಡಲೀ ಎಚ್ಚರದ ಈ ಬದುಕಲ್ಲಿ ಒಮ್ಮೊಮೆ ಹಾಗೆ ಈ ಮನವು (ಮಲಗಲೀ) ನೆರಳಿನ ಹಿಂದೆ ಓಡುತಲಿಹುದು ನಮ್ಮೆಲ್ಲರ ತನುವು ಶಶಿಯನು ಕೈಯಲ್ಲಿ ಹಿಡಿಯುವ ಯತ್ನ ನಡೆದಿದೆ ಪ್ರತಿ ದಿನವೂ ಹಸಿದಿರುವ ಹಕ್ಕ...

ಪ್ರೇಮ ಪತ್ರ

ಪ್ರೇಮದ ಪತ್ರ ಇದು ನಿನ್ನ ಉತ್ತರಕ್ಕಾಗಿ ಕಾಯಿತಿಹುದು. ಹೂ ಅನ್ನು ಎನ್ನುವ ದೈರ್ಯ ನನಗಿಲ್ಲ. ಉಹು ಕೇಳಲು ನನಗೆ ಇಷ್ಟವಿಲ್ಲ. ಪ್ರೀತಿಯ ಭಿಕ್ಷೆ ಬೇಡುತಿಹೆನು ಹೃದಯದ ಕಪಾಲ ಹಿಡಿದು.. ನೀಡು ಎಂದು ಕೇಳುವ ದೈ...

ಅರ್ಪಣೆ

ತಿಳಿಯೇ ಮನವೇ ಇಂದು ಈ ಜೀವ ನಿನಗರ್ಪಣೆ. ತಿಳಿಯೇ ಒಲವೇ ಇನ್ನು ಇಲ್ಲೇಲ್ಲಿದೆ ಘರ್ಷಣೆ. ನನ್ನ ತನುವ ಮನದ ಪ್ರತಿ ಮಿಡಿತ ಮಿಡಿತದಲೂ ನಿನ್ನ ಹೆಸರ ಬರೆದೆ. ಈ ನನ್ನ ಎದೆಯ ಪ್ರತಿ ಬಡಿತ ಬಡಿತದಲು ನಿನ್ನ ಉಸಿರ ಬೆಸೆದೆ. ಆ ದೇವರೇ ಎದುರಾದ್ರು ನಿನ್ನ ಕೈಯ ನಾ ಬಿಡೆನೆ..